ಶ್ರೀನಗರ: ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಗೆ ಸಿಆರ್ಪಿಎಫ್ನ ನಾಲ್ವರು ಯೋಧರು ಹಾಗೂ ನಾಲ್ವರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಿಆರ್ಪಿಎಫ್ ವಾಹನಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸಲಾಗಿದ್ದು, ಸೇನಾ ವಾಹನದ ಅಡಿಯಲ್ಲಿ ಸಿಲುಕಿ ಪ್ರತಿಭಟನಾಕಾರ ಸತ್ತ ಎಂಬ ಕಾರಣಕ್ಕಾಗಿ ಪ್ರತಿಕಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು, ಈ ಭಾಗದಲ್ಲಿ ನಾಲ್ಕು ಪ್ರತ್ಯೇಕ ಸಣ್ಣ ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದ್ದು, ಟಯರ್ಗೆ ಸಾಕಷ್ಟು ಕಡೆಗಳಲ್ಲಿ ಬೆಂಕಿ ಹಚ್ಚಲಾಗಿದೆ. ಗಲಭೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು, ಶ್ರೀನಗರದ ಹಲವೆಡೆ ನಿಷೇದಾಜ್ಞೆ ಹೇರಲಾಗಿದೆ.
ಸೇನಾ ವಾಹನದ ಅಡಿಯಲ್ಲಿ ಸಿಲುಕಿ ಮೃತಪಟ್ಟ ಪ್ರತ್ಯೇಕತಾವಾದಿಯ ನಿವಾಸದ ಬಳಿ ದೇಶದ್ರೋಹಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು, ಗಲಭೆ ನಡೆಸಿ ಸತ್ತವ ದೇಶಕ್ಕಾಗಿ ಪ್ರಾಣ ತೆತ್ತವನು ಎಂಬಂತೆ ಮೆರೆಸಲಾಗುತ್ತಿದೆ ಎಂದು ವರದಿಯಾಗಿದೆ.
Discussion about this post